ಧನಿಷ್ಠೆ   
	ಆಧುನಿಕ ಖಗೋಳ ವಿಜ್ಞಾನದ ಪ್ರಕಾರ ಡೆಲ್ಫೈನಸ್ ಎಂಬುದು ಧನಿಷ್ಠಾ ನಕ್ಷತ್ರದ ಅಂತಾರಾಷ್ಟ್ರೀಯ ಹೆಸರು.  ಪೆಗಾಸಸ್ ಪುಂಜದಿಂದ ಪಶ್ಚಿಮಕ್ಕೆ 6 ಕ್ಷೀಣ ನಕ್ಷತ್ರಗಳ ಪುಟ್ಟ ಅಕೃತಿಯಾಗಿ ಧನಿಷ್ಠಾವನ್ನು ಗುರುತಿಸಬಹುದು.  ಪ್ರಸಿದ್ಧವಾದ ಸಿಗ್ನಸ್ ಹಾಗೂ ಅಕ್ವಿಲಾ ನಕ್ಷತ್ರಪುಂಜಗಳ ನಡುವೆ ಇದು ಉಂಟು. 1965ರಲ್ಲಿ ಇಲ್ಲಿ ಒಂದು ಪ್ರಕಾಶಮಾನವಾದ ನೋವಾ ಕಂಡುಬಂದಿತ್ತು. ಡಾಲ್ಫಿನ್ ಮೀನಿನ ಆಕಾರವನ್ನು ಊಹಿಸಿಕೊಳ್ಳಬಹುದು. 			(ಎಸ್.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ